ವ್ರೆಡೆಸ್ಟೈನ್ ಬೈಕ್ ಟೈರ್‌ಗಳ ವಿಮರ್ಶೆಯಲ್ಲಿ ಹೊಸ ಸೆಂಟೌರೊ ಎಸ್‌ಟಿ ಮತ್ತು ಸೆಂಟೌರೊ ಎನ್‌ಎಸ್ ಉತ್ಪನ್ನಗಳ ಪರೀಕ್ಷೆ ಕುರಿತಾದ ಮಾಹಿತಿ ಹಂಚಿಕೊಳ್ಳಲಾಗಿದೆ. ಹೊಸ ಟೈರ್‌ಗಳ ಕಾರ್ಯಕ್ಷಮತೆ ಕುರಿತು ಇತ್ತೀಚೆಗೆ ನಾವು ಬುದ್ಧ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಸೆಂಟೌರೊ ಎಸ್‌ಟಿ ಮತ್ತು ಸೆಂಟೌರೊ ಎನ್‌ಎಸ್ ಟೈರ್ ಜೋಡಣೆ ಮಾಡಲಾದ ಮೋಟಾರ್‌ಸೈಕಲ್‌ಗಳನ್ನು ಚಾಲನೆ ಮಾಡಿದೆವು. ವ್ರೆಡೆಸ್ಟೈನ್ ಬೈಕ್ ಟೈರ್‌ಗಳು ಟ್ರ್ಯಾಕ್‌ನಲ್ಲಿ ಅತ್ಯುತ್ತಮ ಹಿಡಿತ ಹೊಂದಿದ್ದು, ಹೊಸ ಟೈರ್ ಕಾರ್ಯಕ್ಷಮತೆ ಕುರಿತಂತೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ.